M B Patil✓

@MBPatil

Minister for Commerce & Industries, Infrastructure GoK | Educationist-Engineer-Basava Literature Enthusiast

1.4K Following118K Followers20.9K Posts
  1. M B Patil✓@MBPatil
    Happy to share that our Koti Vruksha Abhiyana-a model initiative ideated and executed in Vijayapura-has its inspiring story featured in #TheNewYorkTimes! An incredible story of a people’s movement: 1.5 crore trees planted, raising forest cover from just 0.17% to 2%. A true testament to political will, systemic action & the power of collective participation. Proud that Vijayapura’s green success is inspiring the world! My heartfelt thanks to all the stakeholders and the people of Vijayapura.
    Download
    1403371.8K232K
  2. M B Patil✓@MBPatil
    ವಿಜಯಪುರದಲ್ಲಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಆರಂಭ: ಕೃಷಿ ಶಿಕ್ಷಣಕ್ಕೆ ಹೊಸ ಬಲ! ರಾಜ್ಯ ಸರ್ಕಾರದ ಅನುಮತಿಯೊಂದಿಗೆ ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯಡಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಆರಂಭವಾಗುತ್ತಿರುವುದು ಉತ್ತರ ಕರ್ನಾಟಕದ ಕೃಷಿ ಶಿಕ್ಷಣದ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆ. ▶️ ಸಂಯೋಜನೆ: ಧಾರವಾಡದ ಕೃಷಿ ವಿಶ್ವವಿದ್ಯಾಲಯ ▶️ ಕೋರ್ಸ್: BSC., (Agriculture) ▶️ ಪ್ರವೇಶಾವಕಾಶ: 120 ವಿದ್ಯಾರ್ಥಿಗಳು ▶️ ಶೈಕ್ಷಣಿಕ ವರ್ಷ: 2026–27 ರಿಂದ ಆರಂಭ ಕೃಷಿ ಶಿಕ್ಷಣಕ್ಕೆ ಉತ್ತೇಜನ ನೀಡುವ ಈ ಪ್ರಯತ್ನವು ಯುವಜನತೆಗೆ ಹೊಸ ಅವಕಾಶಗಳನ್ನು ಕಲ್ಪಿಸುವುದರ ಜೊತೆಗೆ, ಉತ್ತರ ಕರ್ನಾಟಕದ ಕೃಷಿ ಕ್ಷೇತ್ರದ ಸಮಗ್ರ ಪ್ರಗತಿಗೆ ಬಲ ತುಂಬಲಿದೆ!
    Download
    0212407
  3. M B Patil✓@MBPatil
    ಕನ್ನಡ ಕಲಾಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಕರ್ನಾಟಕ ರತ್ನ, ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇನೆ. ತಮ್ಮ ವಿಶಿಷ್ಟ ಅಭಿನಯ, ಸರಳ ವ್ಯಕ್ತಿತ್ವ ಹಾಗೂ ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಅವರು ಕನ್ನಡಿಗರ ಹೃದಯದಲ್ಲಿ ಸದಾ ಅಜರಾಮರ. ಅವರ ಕಲಾಸೇವೆ ಮತ್ತು ಮಾನವೀಯ ಕಾರ್ಯಗಳು ಸ್ಮರಣೀಯ #Appu #ಅಪ್ಪು #puneethrajkumar
    Download
    0331151.2K
  4. M B Patil✓@MBPatil
    Glad to join H.E. Ms. Maya Tissafi, Ambassador of Switzerland to India and Bhutan, for a lunch meeting marking the launch of Swiss International Air Lines’ first direct Zurich–Bengaluru flight. This new direct air link will strengthen Karnataka’s global connectivity and open up fresh opportunities for trade, investment, tourism and technology collaboration. I highlighted Karnataka’s opportunities in high-precision machine tools, AI and other advanced sectors, shared our vision for KWIN City, and invited Swiss companies to participate in GIM 2027. We look forward to deepening Karnataka–Switzerland ties and translating stronger partnerships into quality investments and high-value jobs. @SwissAmbIND #KWINCity #GIM2027 @PriyankKharge
    Download
    09421.1K
  5. M B Patil✓@MBPatil
    ಬೆಂಗಳೂರು-ಜ್ಯೂರಿಕ್ ನೇರ ವಿಮಾನಯಾನ: ಕರ್ನಾಟಕದ ಜಾಗತಿಕ ಸಂಪರ್ಕಕ್ಕೆ ಹೊಸ ಅಧ್ಯಾಯ! ಸ್ವಿಟ್ಜರ್ಲೆಂಡ್ ನ ರಾಯಭಾರಿ ಶ್ರೀಮತಿ ಮಾಯಾ ಟಿಸ್ಸಾಫಿ ಅವರೊಂದಿಗೆ ಸಭೆ ಸ್ವಿಸ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ನ ಜ್ಯೂರಿಕ್–ಬೆಂಗಳೂರು ಮೊದಲ ನೇರ ವಿಮಾನಯಾನ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಭಾರತ ಮತ್ತು ಭೂತಾನ್ ಗೆ ಸ್ವಿಟ್ಜರ್ಲೆಂಡ್ ನ ರಾಯಭಾರಿಯಾಗಿರುವ ಶ್ರೀಮತಿ ಮಾಯಾ ಟಿಸ್ಸಾಫಿ ಅವರೊಂದಿಗೆ ಔತಣಕೂಟದ ಸಭೆಯಲ್ಲಿ ಭಾಗವಹಿಸಿದೆ. ಈ ನೇರ ವಿಮಾನಯಾನ ಸಂಪರ್ಕವು ಕರ್ನಾಟಕ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ವ್ಯಾಪಾರ, ಹೂಡಿಕೆ, ಪ್ರವಾಸೋದ್ಯಮ ಹಾಗೂ ತಂತ್ರಜ್ಞಾನ ಸಹಕಾರಕ್ಕೆ ಹೊಸ ಅವಕಾಶಗಳನ್ನು ತೆರೆದಿಡಲಿದೆ. ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕವನ್ನು ತಲುಪಲು ಮತ್ತಷ್ಟು ಅನುಕೂಲ ಕಲ್ಪಿಸುವುದರೊಂದಿಗೆ, ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನೂ ಬಲಪಡಿಸಲಿದೆ. ಭಾರತದಲ್ಲಿ 50ಕ್ಕೂ ಹೆಚ್ಚು ಸ್ವಿಸ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಹೈ-ಪ್ರಿಸಿಷನ್ ಮೆಷಿನ್ ಟೂಲ್ಸ್, ಕೃತಕ ಬುದ್ಧಿಮತ್ತೆ (AI) ಸೇರಿದಂತೆ ವಿವಿಧ ವಲಯಗಳಲ್ಲಿ ರಾಜ್ಯದಲ್ಲಿರುವ ಹೂಡಿಕೆ ಅವಕಾಶಗಳನ್ನು ರಾಯಭಾರಿಯವರಿಗೆ ವಿವರಿಸಿದೆ. ಜೊತೆಗೆ ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಕ್ವಿನ್ ಸಿಟಿ ಯೋಜನೆಯ ಕುರಿತು ಮಾಹಿತಿ ಹಂಚಿಕೊಂಡು, 2027ರಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ (GIM 2027)ದಲ್ಲಿ ಪಾಲ್ಗೊಳ್ಳುವಂತೆ ಸ್ವಿಸ್‌ ಕಂಪನಿಗಳಿಗೆ ಆಹ್ವಾನಿಸಿದೆ. ಇಂದಿನ ಸಭೆಯಲ್ಲಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಸೇರಿದಂತೆ ಕೈಗಾರಿಕಾ ಇಲಾಖೆ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಜಾಗತಿಕ ಸಂಪರ್ಕಕ್ಕೆ ಹೊಸ ವೇಗ, ಹೂಡಿಕೆಗೆ ಹೊಸ ಅವಕಾಶ, ಕೈಗಾರಿಕಾ ಬೆಳವಣಿಗೆಗೆ ಹೊಸ ಆಯಾಮ ನೀಡುತ್ತಾ ಕರ್ನಾಟಕವನ್ನು ಜಾಗತಿಕ ಹೂಡಿಕೆಯ ಪ್ರಮುಖ ತಾಣವನ್ನಾಗಿಸುವ ನಮ್ಮ ಸಂಕಲ್ಪಕ್ಕೆ ಇಂತಹ ಅಂತರರಾಷ್ಟ್ರೀಯ ಸಹಭಾಗಿತ್ವಗಳು ಮತ್ತಷ್ಟು ಬಲ ನೀಡಲಿವೆ. @PriyankKharge #GIM2027 #KWINCity
    Download
    07541.2K
  6. M B Patil✓@MBPatil
    Had an engaging conversation with Shri Himanshu Priyadarshi, Senior Vice President, Hindustan Coca-Cola Beverages, Shri Mukund Trivedi, Cluster Head, and their team. We held detailed discussions on investment opportunities in Karnataka, industrial expansion, and the potential for sustainable development. The meeting was significant in further strengthening industry partnership in the State’s development journey. #cocacola #hidustancocacola
    Download
    27421.3K
  7. M B Patil✓@MBPatil
    ಹಿಂದೂಸ್ತಾನ್ ಕೋಕಾ-ಕೋಲಾ ಬೆವರೇಜಸ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಶ್ರೀ ಹಿಮಾಂಶು ಪ್ರಿಯದರ್ಶಿ, ಕ್ಲಸ್ಟರ್ ಹೆಡ್ ಶ್ರೀ ಮುಕುಂದ್ ತ್ರಿವೇದಿ ಹಾಗೂ ಅವರ ತಂಡದೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದೆವು. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಹೂಡಿಕೆಯ ಅವಕಾಶಗಳು, ಕೈಗಾರಿಕಾ ವಿಸ್ತರಣೆ ಹಾಗೂ ಸುಸ್ಥಿರ ಅಭಿವೃದ್ಧಿಯ ಸಾಧ್ಯತೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ರಾಜ್ಯದ ಅಭಿವೃದ್ಧಿಯ ಪಯಣದಲ್ಲಿ ಉದ್ಯಮಗಳ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಮಾತುಕತೆ ಮಹತ್ವದ್ದಾಗಿತ್ತು. #CocaCola #hindustancocacola
    Download
    210621.7K
  8. M B Patil✓@MBPatil
    ವಿಶ್ವದ ಮೊಟ್ಟಮೊದಲ ಪ್ರಜಾಪ್ರಭುತ್ವದ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅನುಭವ ಮಂಟಪವು ಬಸವಾದಿ ಶರಣರು ವಿಶ್ವಕ್ಕೆ ನೀಡಿದ ಅಮೂಲ್ಯ ಕೊಡುಗೆ. ಇಲ್ಲಿನ ಪ್ರತಿ ಕಂಬವೂ ಶರಣರ ಸಂಕಲ್ಪ, ತತ್ವಾದರ್ಶ ಹಾಗೂ ಸಮಾನತೆಯ ಸಂದೇಶವನ್ನು ಸಾರುತ್ತದೆ. ಇಂತಹ ಶ್ರೇಷ್ಠ ಇತಿಹಾಸ ಮತ್ತು ಮಹೋನ್ನತ ಪರಂಪರೆಯನ್ನು ಹೊಂದಿರುವ ಅನುಭವ ಮಂಟಪವು ಪುನರ್‌ನಿರ್ಮಾಣಗೊಳ್ಳುತ್ತಿದ್ದು, ಬಸವಣ್ಣನವರ ಹಾಗೂ ಶರಣರ ವಿಚಾರಧಾರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಅನುಭವ ಮಂಟಪಕ್ಕೆ ಭೇಟಿ ನೀಡಿ, ಕಾಮಗಾರಿಯನ್ನು ವೀಕ್ಷಿಸಿದೆ. ಈ ತಾಣದ ದೃಶ್ಯಾವಳಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ… #ಅನುಭವಮಂಟಪ #ಬಸವಕಲ್ಯಾಣ
    Download
    18762.4K
  9. M B Patil✓@MBPatil
    ಬಸವಕಲ್ಯಾಣ: ಮಹಾಮನೆ ಮಠದ ಆವರಣದಲ್ಲಿ ಜರುಗಿದ ಐತಿಹಾಸಿಕ ಕಲ್ಯಾಣ ಪರ್ವದ ರಜತ ಮಹೋತ್ಸವದ ಭವ್ಯ ಕ್ಷಣಗಳು… #ಕಲ್ಯಾಣಪರ್ವ
    Download
    015451.3K
  10. M B Patil✓@MBPatil
    ಕೈಗಾರಿಕಾ ಅಭಿವೃದ್ಧಿಗೆ ವೇಗ, ಹೂಡಿಕೆದಾರರಿಗೆ ಸುಗಮ ವಾತಾವರಣ ಹಾಗೂ ಉದ್ಯಮಗಳಿಗೆ ಕಾಲಮಿತಿಯಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, KIADB ಸಿಇಒ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ, ಹೂಡಿಕೆ ಪ್ರಸ್ತಾವನೆಗಳ ತ್ವರಿತ ಅನುಷ್ಠಾನ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳ ಸರಳೀಕರಣಕ್ಕೆ ಸಂಬಂಧಿಸಿದಂತೆ ಸೂಕ್ತ, ಸಲಹೆ ಸೂಚನೆಗಳನ್ನು ನೀಡಿದೆ. ಹೂಡಿಕೆಗಳು ಒಪ್ಪಂದಗಳಿಗೆ ಮಾತ್ರ ಸೀಮಿತವಾಗದೆ, ಉದ್ಯಮಗಳ ಸ್ಥಾಪನೆ, ಉದ್ಯೋಗ ಸೃಷ್ಟಿ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂಬುದೇ ನಮ್ಮ ಗುರಿ!
    Download
    08622.3K
  11. M B Patil✓@MBPatil
    ಕೋಲಾರ ಜಿಲ್ಲೆಯ ವೇಮಗಲ್ ನಲ್ಲಿ ₹1,000 ಕೋಟಿ ಹೂಡಿಕೆಯಲ್ಲಿ ಸ್ಥಾಪಿಸಿರುವ ಪೊದ್ದಾರ್ ಪ್ಲಂಬಿಂಗ್ ಪೈಪ್ಸ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದೆ. ಈ ಕುರಿತು ನ್ಯೂಸ್ ಫಸ್ಟ್ ವರದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. #PoddarPipes @NewsFirstKan
    Download
    313581.9K
  12. M B Patil✓@MBPatil
    ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರ ಜನ್ಮದಿನದಂದು ಗೌರವದ ನಮನಗಳು. ಮೂರು ಬಾರಿ ಲೋಕಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ, ಉಪರಾಷ್ಟ್ರಪತಿಗಳಾಗಿ ಹಾಗೂ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಅವರು, ಸಂವಿಧಾನದ ಆಶಯಗಳನ್ನು ಎತ್ತಿಹಿಡಿದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಗೌರವ ತಂದರು. ಶೋಷಿತ ಮತ್ತು ವಂಚಿತ ಸಮುದಾಯಗಳ ಧ್ವನಿಯಾಗಿ, ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಸ್ಥಾಪನೆಗಾಗಿ ಅವರು ಸಲ್ಲಿಸಿದ ಸೇವೆ ಅನನ್ಯ. ಶಿಕ್ಷಣ ತಜ್ಞರಾಗಿ, ಪತ್ರಕರ್ತರಾಗಿ ಹಾಗೂ ರಾಜತಾಂತ್ರಿಕರಾಗಿಯೂ ತಮ್ಮದೇ ಆದ ಛಾಪು ಮೂಡಿಸಿದ ಅವರ ಬದುಕು ಎಲ್ಲರಿಗೂ ಸ್ಫೂರ್ತಿಯಾಗಿದೆ. #KRNarayanan
    Download
    07261.1K
  13. M B Patil✓@MBPatil
    ಕಲ್ಲ ಹೊತ್ತು ಕಡಲೊಳಗೆ ಮುಳುಗಿದೊಡೆ ಎಡರಿಂಗೆ ಕಡೆಯುಂಟೇ ಅವ್ವ? ಉಂಡು ಹಸಿವಾಯಿತ್ತೆಂದೊಡೆ ಭಂಗವೆಂಬೆ! ಕಂಡ ಕಂಡ ಠಾವಿನಲ್ಲಿ ಮನ ಬೆಂದೊಡೆ ಗಂಡ ಚೆನ್ನಮಲ್ಲಿಕಾರ್ಜುನಯ್ಯನೆಂತೊಲಿವನವ್ವ? - ಅಕ್ಕಮಹಾದೇವಿ
    06301.2K
  14. M B Patil✓@MBPatil
    ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ
    Download
    06281.2K
  15. M B Patil✓@MBPatil
    ಕೋಲಾರದ ವೇಮಗಲ್ ನಲ್ಲಿ ₹1,000 ಕೋಟಿ ಹೂಡಿಕೆಯ ಪೊದ್ದಾರ್ ಪ್ಲಂಬಿಂಗ್ ಪೈಪ್ ಉತ್ಪಾದನಾ ಘಟಕ ಉದ್ಘಾಟನೆ ಈ ಯೋಜನೆಯ ಪ್ರಮುಖ ಅಂಶಗಳು: 🔹 3,000+ ಹೆಚ್ಚು ನೇರ ಉದ್ಯೋಗ ಅವಕಾಶಗಳು 🔹 ಕನಿಷ್ಠ ಶೇ.60ರಷ್ಟು ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆಯ ನೇಮಕಾತಿ 🔹 ಕೇವಲ 1 ವರ್ಷದ ಶರವೇಗದ ಅವಧಿಯಲ್ಲಿ ಭೂಮಿ ಹಂಚಿಕೆಯಿಂದ ಕಾರ್ಯಾರಂಭ 🔹 ಇಲ್ಲಿ ಉತ್ಪಾದನೆಯಾಗುವ ಗುಣಮಟ್ಟದ ಪೈಪ್ಗಳನ್ನು ಹೊರದೇಶಗಳಿಗೂ ರಫ್ತು ಮಾಡುವ ಗುರಿ 🔹 ನೌಕರರ ವಸತಿಗಾಗಿ ಕಂಪನಿಯಿಂದ 150 ಮನೆಗಳ ನಿರ್ಮಾಣ ಕರ್ನಾಟಕವನ್ನು ಉದ್ಯೋಗ-ಕೇಂದ್ರಿತ ಹಾಗೂ ಪರಿಸರ ಸ್ನೇಹಿ ಕೈಗಾರಿಕಾ ಅಭಿವೃದ್ಧಿಯತ್ತ ಮುನ್ನಡೆಸುವಲ್ಲಿ ಈ ಯೋಜನೆ ಮಹತ್ವದ ಮೈಲಿಗಲ್ಲಾಗಿದೆ.
    Download
    39582K
  16. M B Patil✓@MBPatil
    ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಸಿ, ಕಬ್ಬು ಬೆಳೆಗಾರರ ಹಿತಾಸಕ್ತಿ, ಬೆಂಬಲ ಬೆಲೆ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಸಚಿವ ಸಂಪುಟದ ಸಹೋದ್ಯೋಗಿಗಳು, ಶಾಸಕರು, ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. @CMofKarnataka @DKShivakumar @JarkiholiSatish @cheluvarayswamy @SS_Mallikarjun_ @SantoshSLadINC @LaxmanSavadi
    Download
    05421.8K
  17. M B Patil✓@MBPatil
    ಕೋಲಾರದ ವೇಮಗಲ್ ನಲ್ಲಿ ₹1,000 ಕೋಟಿ ಹೂಡಿಕೆಯ ಪೊದ್ದಾರ್ ಪ್ಲಂಬಿಂಗ್ ಪೈಪ್ ಉತ್ಪಾದನಾ ಘಟಕ ಆರಂಭ! ▶️ 3,000 ನೇರ ಉದ್ಯೋಗಗಳ ಸೃಷ್ಟಿ, ▶️ ಸ್ಥಳೀಯ ಆರ್ಥಿಕತೆಗೆ ಬಲ ▶️ ಜಗತ್ತಿನ ಅತಿ ದೊಡ್ಡ ಪರಿಸರ ಸ್ನೇಹಿ ಪ್ಲಂಬಿಂಗ್ ಪೈಪ್ ಉತ್ಪಾದನಾ ಘಟಕ ▶️ ಜಾಗತಿಕ ಮಾರುಕಟ್ಟೆಗೆ ಕರ್ನಾಟಕದ ಉತ್ಪಾದನಾ ಸಾಮರ್ಥ್ಯದ ಪರಿಚಯ. ಹೂಡಿಕೆ ಒಪ್ಪಂದಗಳು ಕಾಗದಕ್ಕೆ ಸೀಮಿತವಾಗದೆ, ಕಾರ್ಯರೂಪಕ್ಕೆ ಬರುವಂತೆ ಮಾಡುವ ನಮ್ಮ ಬದ್ಧತೆ ಅಚಲ! #PoddarPipes
    Download
    2513976.3K
  18. M B Patil✓@MBPatil
    ವಿಜಯಪುರ ಜಿಲ್ಲೆಯ ಯುವತಿಯರಾದ ರೂಪಾಮಾಳಿ ಹಾಗೂ ನಿಸರ್ಗ ಅವರು ಉದ್ಯೋಗ ಸಂದರ್ಶನಕ್ಕೆ ತೆರಳುತ್ತಿದ್ದ ವೇಳೆ ತುಮಕೂರು ಜಿಲ್ಲೆಯ ದಾಬಸ್ ಪೇಟೆ ಸಮೀಪ ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿರುವ ಸುದ್ದಿ ಅತ್ಯಂತ ನೋವು ತಂದಿದೆ. ತಮ್ಮ ಬದುಕಿನಲ್ಲಿ ಹೊಸ ಭರವಸೆಗಳನ್ನು ಮೂಡಿಸಿಕೊಳ್ಳಲು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕನಸುಗಳನ್ನು ಹೊತ್ತು ಹೊರಟಿದ್ದ ಈ ಯುವತಿಯರ ಜೀವನ ಹೀಗೆ ಅಕಾಲಿಕವಾಗಿ ಅಂತ್ಯಗೊಂಡಿರುವುದು ಹೃದಯವಿದ್ರಾವಕ. ದುಃಖತಪ್ತ ಕುಟುಂಬದವರಿಗೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ. ಮೃತ ಯುವತಿಯರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅಪಘಾತದಲ್ಲಿ ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಈ ದುರ್ಘಟನೆ ಸಂಬಂಧಿಸಿದಂತೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿದ್ದು, ಮೃತರ ಪಾರ್ಥಿವ ಶರೀರಗಳನ್ನು ಅವರ ಸ್ವಗ್ರಾಮಗಳಿಗೆ ತಲುಪಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಹಾಗೂ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಈ ದುಃಖದ ಸಂದರ್ಭದಲ್ಲಿ ನೊಂದ ಕುಟುಂಬಗಳೊಂದಿಗೆ ನಾವೆಲ್ಲರೂ ಇದ್ದೇವೆ.
    Download
    25395.3K
  19. M B Patil✓@MBPatil
    ಭಾಲ್ಕಿ ಹಿರೇಮಠ ಸಂಸ್ಥಾನದ ಪಟ್ಟಾಧ್ಯಕ್ಷರಾದ ಪರಮಪೂಜ್ಯ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಅವರನ್ನು ಭೇಟಿಯಾದ ಸಂದರ್ಭದಲ್ಲಿ, ಪೂಜ್ಯರು ಡಾ. ಫ. ಗು. ಹಳಕಟ್ಟಿಯವರ ಪರಿಶ್ರಮದ ಫಲವಾದ ‘ಶಿವಾನುಭವ ಪತ್ರಿಕೆ - ಶತಮಾನದ ಸಮಗ್ರ ನೋಟ’ ಸಂಪುಟ ಹಾಗೂ ‘ಶರಣಲೋಕ’ ಕೃತಿಗಳನ್ನು ಆಶೀರ್ವಾದಪೂರ್ವಕವಾಗಿ ನೀಡಿದರು. 1926ರಲ್ಲಿ ಪ್ರಕಟಣೆ ಆರಂಭಿಸಿದ ಶಿವಾನುಭವ ಪತ್ರಿಕೆ ಇಂದು ಶತಮಾನದ ಸಂಭ್ರಮದಲ್ಲಿದೆ. ಈ ಐತಿಹಾಸಿಕ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ, ಡಾ. ಫ. ಗು. ಹಳಕಟ್ಟಿಯವರ ಜೀವನ ಮತ್ತು ಸಾಧನೆಗಳು ಹಾಗೂ ಶಿವಾನುಭವ ಪತ್ರಿಕೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕೊಡುಗೆಗಳ ಕುರಿತು ನಾಡಿನಾದ್ಯಂತ ವಿಚಾರಗೋಷ್ಠಿಗಳು, ಸಂಕಿರಣಗಳು, ಚರ್ಚೆಗಳು ಹಾಗೂ ಚಿಂತನಕೂಟಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಇದರ ಭಾಗವಾಗಿ, ಮುಂಬರುವ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಬೃಹತ್ ಶತಮಾನೋತ್ಸವ ಸಮಾರಂಭ ಹಾಗೂ ಬಸವ ಜಯಂತಿಯನ್ನು ಆಚರಿಸುವ ಕುರಿತು ಪೂಜ್ಯ ಗುರುಗಳೊಂದಿಗೆ ಚರ್ಚಿಸಲಾಯಿತು. ಶರಣರ ವಚನ ಸಾಹಿತ್ಯದ ಅಮೂಲ್ಯ ಮೌಲ್ಯಗಳು, ಬಸವಣ್ಣನವರ ಸಮಾನತೆಯ ತತ್ವಗಳು ಹಾಗೂ ಮಾನವೀಯತೆಯ ಸಂದೇಶಗಳು ಮುಂದಿನ ಪೀಳಿಗೆಗಳಿಗೂ ತಲುಪಬೇಕು. ವಚನ ಸಾಹಿತ್ಯದ ಜ್ಞಾನಜ್ಯೋತಿ ಮನೆಮನೆಗೂ ತಲುಪಿ, ಶರಣ ಸಂಸ್ಕೃತಿಯ ಶ್ರೀಮಂತ ಪರಂಪರೆ ಯುಗಯುಗಾಂತರಗಳವರೆಗೆ ಬೆಳಗಲಿ. #ಶಿವಾನುಭವ
    Download
    0416720
  20. M B Patil✓@MBPatil
    ನಾಡಿನ ನೆಲ-ಜಲದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಸಮಾಜವಾದಿ ಚಿಂತಕ, ಹಿಂದುಳಿದ ವರ್ಗಗಳ ಧೀಮಂತ ನಾಯಕ ಹಾಗೂ ಕೃಷಿ ಕಾರ್ಮಿಕರು, ರೈತರು ಮತ್ತು ಗ್ರಾಮೀಣ ಜನತೆಯ ಏಳಿಗೆಗಾಗಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಅವರ ಜನ್ಮದಿನದಂದು ಗೌರವದ ನಮನಗಳು. ಆಶ್ರಯ, ಆರಾಧನಾ, ಅಕ್ಷಯ ಸೇರಿದಂತೆ ಹಲವು ಜನಪರ ಯೋಜನೆಗಳ ಮೂಲಕ ಸಾಮಾಜಿಕ ನ್ಯಾಯ ಹಾಗೂ ನಾಡಿನ ಸಮಗ್ರ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅನನ್ಯ. ಅವರ ಜನಪರ ಚಿಂತನೆಗಳು ಹಾಗೂ ಸಮಾಜಮುಖಿ ಕಾರ್ಯಗಳು ಸದಾ ಸ್ಮರಣೀಯ. #Bangarappa
    Download
    07481.1K